ಮೇ. 26 ರಂದು ಮುಟ್ಟಳ್ಳಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಕರಾವಳಿ ಪ್ರಭ ನ್ಯೂಸ್

ಭಟ್ಕಳ : ಪಟ್ಟಣದ ನಾಯಕ್ ಹೆಲ್ತ್ ಸೆಂಟರ್, ಗಣೇಶ ನೇತ್ರಾಲಯ, ಆರೋಗ್ಯ ಭಾರತಿ ಭಟ್ಕಳ, ಆಮಿತಾಕ್ಷ ಯೋಗ ಟ್ರಸ್ಟ್ ಹಾಗೂ ಅದಮ್ಯ ಸಂಕಲ್ಪ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೇ.26ರಂದು ತಾಲೂಕಿನ ಮುಟ್ಟಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಭಾಭವನದಲ್ಲಿ ಬೆಳಿಗ್ಗೆ 9 ರಿಂದ 1 ಗಂಟೆಯ ತನಕ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಣೇಶ ನೇತ್ರಾಲಯ ಭಟ್ಕಳದ ಮುಖ್ಯಸ್ಥ ಡಾ. ವಿಶ್ವನಾಥ ನಾಯಕ ತಿಳಿಸಿದರು.ದೃಷ್ಟಿಯ ಸುರಕ್ಷತೆ ನಮ್ಮ ಧ್ಯೇಯ ಎನ್ನುವ ಧ್ಯೇಯ ವಾಕ್ಯದೊಂದಿಗೆ ನಗರಕ್ಕೆ ಹೊಂದಿಕೊಂಡಿದ್ದರೂ ಕೂಡಾ ಗ್ರಾಮೀಣ ಪ್ರದೇಶವಾಗಿರುವ ಮುಟ್ಟಳ್ಳಿಯಲ್ಲಿನ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣೆಯನ್ನು ನಡೆಸಿ ಅರ್ಹರನ್ನು ಗುರುತಿಸಿ ರಿಯಾಯಿತಿ ದರದಲ್ಲಿ ಕಣ್ಣಿನ ಪೊರೆ ಚಿಕಿತ್ಸೆ, ಶಸ್ತç ಚಿಕಿತ್ಸೆ ಇತ್ಯಾದಿಗಳನ್ನು ಒದಗಿಸುವ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದೂ ಅವರು ಕೋರಿದ್ದಾರೆ.

ಶಿಬಿರದಲ್ಲಿ ನುರಿತ ವೈದ್ಯರಿಂದ ಉಚಿತ ಕಣ್ಣಿನ ತಪಾಸಣೆ ನಡೆಸಿ ವೈದ್ಯಕೀಯ ತಪಾಸಣೆಯಲ್ಲಿ ಔಷಧಿಯ ಅಗತ್ಯವಿರುವವರಿಗೆ ಉಚಿತವಾಗಿ ಔಷಧಿಯನ್ನು ವಿತರಿಸಲಾಗುತ್ತದೆ. ಕನ್ನಡಕದ ಅಗತ್ಯವಿರುವವರಿಗೆ ಶಿಬಿರದಲ್ಲಿಯೇ ರಿಯಾಯಿತಿ ದರದಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಶಸ್ತ್ರ ಚಿಕಿತ್ಸೆಯ ಅಗತ್ಯವಿರುವವರಿಗೆ ಸುಸಜ್ಜಿತವಾದ ಆಪರೇಶನ್ ಥಿಯೇಟರ್ ಹೊಂದಿರುವ ಗಣೇಶ ನೇತ್ರಾಲಯ ಭಟ್ಕಳದಲ್ಲಿಯೇ ರಿಯಾಯಿತಿ ದರದಲ್ಲಿ ಮಾಡಲಾಗುವುದು. ಶಿಬಿರದಲ್ಲಿ ಆಯ್ಕೆಯಾದ ಕಣ್ಣಿನ ಪೊರೆ ಶಿಬಿರಾರ್ಥಿಗಳಿಗೆ ಪ್ರಾಥಮಿಕ ತಪಾಕಣೆ (ಬಿ.ಪಿ. ಶುಗರ್, ಕಣ್ಣಿನ ತಪಾಪಣೆ)ಯನ್ನು ಶಿಬಿರದಲ್ಲಿ ಮಾಡಿಸಲಾಗುವುದು. ಬಿ.ಪಿ, ಸಕ್ಕರೆ ಕಾಯಿಲೆ ಮತ್ತು ಹೃದ್ರೋಗ ಸಂಬಂಧ ಚಿಕಿತ್ಸೆ ಪಡೆದುಕೊಂಡಿದುವ ಶಿಬಿರಾರ್ಥಿಗಳು ಶಿಬಿರಕ್ಕೆ ಬರುವಾಗ ತಮಗೆ ವೈದ್ಯರು ನೀಡಿರುವ ವೈದ್ಯಕೀಯ ಮಾಹಿತಿಗಳನ್ನು ಹಾಗೂ ನಿರಂತರವಾಗಿ ತೆಗೆದುಕೊಳ್ಳುತ್ತಿರುವ ಮಾತ್ರಗಳನ್ನು ತರುವುದು ಕಡ್ಡಾಯವಾಗಿದೆ ಎಂದರು. ಶಿಬಿರದಲ್ಲಿ ಪಾಲ್ಗೊಳ್ಳುವವರು ತಮ್ಮ ಹೆಸರುಗಳನ್ನು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಇಲ್ಲವೇ ಗಣೇಶ ನೇತ್ರಾಲಯಮ ನಾಯಕ್ ಹೆಲ್ತ್ ಸೆಂಟರ್, ಸಾಗರ ರಸ್ತೆ ಭಟ್ಕಳ ಇಲ್ಲಿಗೆ ಭೇಟಿ ನೀಡುವ ಮೂಲಕ ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆಯೂ ಕೋರಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಲು ಗಣೇಶ ನೇತ್ರಾಲಯ ಭಟ್ಕಳ 8618292028 ಆರೋಗ್ಯ ಭಾರತಿ – ದೇವೇಂದ್ರ 7892785149 ಸಂದೀಪ ಮುಟ್ಟಳ್ಳಿ 9886191962 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *