ಕರಾವಳಿ ಪ್ರಭ ವಿಶೇಷ
ವಿಶ್ವವಿಖ್ಯಾತ ಮುರುಡೇಶ್ವರ ಸಮೀಪದ ಬೇಂಗ್ರೆ ಗಾಲ್ಫ ಮೈದಾನದಲ್ಲಿ ನವೆಂಬರ್ 21ರಿಂದ 23ರ ವರೆಗೆ ಅದ್ಧೂರಿಯಾಗಿ ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು ಮತ್ಸ್ಯಮೇಳ ನಡೆಯಲಿದ್ದು,ಸ್ಥಳದಲ್ಲಿ ಭಾರೀ ಸಿದ್ಧತೆ ನಡೆದಿದೆ.
ಮಂಕಾಳ ವೈದ್ಯರು ಮೀನುಗಾರಿಕಾ ಸಚಿವರಾದ ನಂತರ ಮೀನುಗಾರಿಕೆ ಇಲಾಖೆ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಮೀನುಗಾರ ಸಮುದಾಯದವರೇ ಆದ ಮಂಕಾಳ ವೈದ್ಯರು ಸಚಿವರಾಗಿ ಮೀನುಗಾರಿಕೆ ಇಲಾಖೆಗೆ ಹೊಸ ಹೊಸ ಯೋಜನೆ ಜ್ಯಾರಿಗೆ ತರುತ್ತಿದ್ದಾರೆ. ಮೀನುಗಾರಿಕಾ ಇಲಾಖೆಯಿಂದ ಮೀನುಗಾರರಿಗೆ ಅನೇಕ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ಸೀ ಪುಡ್, ಸೀ ಅಂಬುಲೆನ್ಸ ಯೋಜನೆ ಜ್ಯಾರಿಗೆ ತಂದಿದ್ದು, ಇದರಿಂದ ಮೀನುಗಾರರಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ಸಮುದ್ರ ಮೀನುಗಾರಿಕೆಯಷ್ಟೇ ಒಳನಾಡು ಮೀನುಗಾರಿಕೆಯೂ ಇರುವುದರಿಂದ ಅದಕ್ಕೂ ಆದ್ಯತೆ ನೀಡಲಾಗುತ್ತಿದೆ. ಮೀನುಗಾರಿಕೆ ಅಭಿವೃದ್ಧಿಗೆ ಸಚಿವರು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ರಾಜ್ಯದ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿದ್ದು, ಇದೊಂದು ಮೀನುಗಾರಿಕೆ ಹಬ್ಬವಾಗಿದೆ ಎಂದು ಬಣ್ಣಿಸಿದ್ದಾರೆ. ವಿಶ್ವಮೀನುಗಾರಿಕಾ ದಿನಾಚರಣೆ ಮತ್ತು ಮತ್ಸ್ಯ ಮೇಳವನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಏರ್ಪಡಿಸಲಾಗುತ್ತಿದ್ದು, ಈ ಸಲ ಕರಾವಳಿ ಭಾಗದ ಭಟ್ಕಳದಲ್ಲಿ ಏರ್ಪಡಿಸಲಾಗಿದೆ. ವಿಶ್ವ ಮೀನುಗಾರಿಕೆ ದಿನಾಚರಣೆ ಕಾಟಾಚಾರದ ಕಾರ್ಯಕ್ರಮ ಆಗಬಾರದು. ಇದರಿಂದ ಮೀನುಗಾರರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ವಿಜ್ರಂಭಣೆಯಿಂದ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಮೀನುಗಾರ ತಜ್ಞರು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ. ಮತ್ಸ್ಯಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರು, ಸಾರ್ವಜನಿಕರು ಪಾಲ್ಗೊಂಡು ಇದರ ಸದುಪಯೋಗವನ್ನು ಮೀನುಗಾರರು ಪಡೆಯಬೇಕು ಎಂದು ಅವರು ಮನವಿ ಮಾಡಿದರು. ಈ ಮತ್ಸ್ಯಮೇಳದಿಂದ ಒಳನಾಡು ಮತ್ತು ಸಮುದ್ರ ಮೀನುಗಾರಿಕೆ ನಡೆಸುವವರಿಗೆ ಅನುಕೂಲವಾಗಿದೆ. ಮತ್ಸ್ಯಮೇಳದಲ್ಲಿ 500 ವಿಧದ ಮೀನುಗಳ ಪ್ರದರ್ಶನ ಇರಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮೀನಿನ ಸಂತತಿ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದ ಅವರು ಮೂರುದ ದಿನಗಳ ಕಾಲ ಮೀನುಗಾರರ ಹಬ್ಬವೇ ನಡೆಯಲಿದೆ. ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಈ ಮತ್ಸ್ಯಮೇಳ ಸಹಕಾರಿಯಾಗಿದೆ ಎಂದ ಅವರು ಮತ್ಸ್ಯಮೇಳದಲ್ಲಿ ಅಕ್ವೇರಿಯಂ ಗ್ಯಾಲರಿ, ಸುರಂಹಗ ಅಕ್ವೇರಿಯಂ, ಸರ್ಕಾರಿ ಸಂಸ್ಥೆಗಳ ಮಳಿಗೆಗಳು, ಖಾಸಗಿ ಸಂಸ್ಥೆಗಳ ಮಳಿಗೆಗಳು, ಫೀಡ್ ಕಂಪನಿಗಳಿಂದ ಪ್ರದರ್ಶನ, ಸಮುದ್ರ ಕಳೆದ ಪ್ರದರ್ಶನ, ತಾಂತ್ರಿಕ ಗೋಷ್ಠಿಗಳು, ಮೀನುಗಾರಿಕೆಯ ಯಶಸ್ಸಿ ಯಶೋಗಾಥೆಗಳು, ಮೀನು ಆಹಾರ ಮಳಿಗೆಗಳು, ಮನೋರಂಜನೆ, ಅಲಂಕಾರಿಕಾ ಮೀನು ಮಾರಾಟ ನಡೆಯಲಿದೆ. ಕಾರ್ಯಕ್ರಮದಲ್ಲಿ 5 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ. ಮೂರೂ ದಿನವೂ ಸಹ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಸಂಜೆ ಖ್ಯಾತ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.