ಕರಾವಳಿ ಪ್ರಭ ನ್ಯೂಸ್
ಭಟ್ಕಳ: ಎಂ ಜಿ ಝೆರಾಕ್ಸ ಮಾಲೀಕರಾದ ಪರಮೇಶ್ವರ ಭಟ್ಟರು ಶಿರಾಲಿಯ ಜನತಾ ವಿದ್ಯಾಲಯದ ಸನಿಹದ ಕಟ್ಟಡದಲ್ಲಿ ನೂತನವಾಗಿ ಎಂ ಜಿ ಮಾರ್ಟ (ಸೂಪರ್ ಮಾರ್ಕೆಟ್ ) ಉದ್ಯಮಕ್ಕೆ ಕೈಹಾಕಿದ್ದು, ಇದು ಜುಲೈ 10 ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಶುಭ ಮುಹೂರ್ತದಲ್ಲಿ ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ.
ಈಗಾಗಲೇ ಸಾಗರ ರಸ್ತೆಯಲ್ಲಿ ಎಂ ಜಿ ಝೆರಾಕ್ಸ ಮತ್ತು ಸ್ಟೇಷನರಿ,ಪ್ರಿಂಟಿಂಗ್ ಉದ್ಯಮ ನಡೆಸುತ್ತಾ ಪ್ರಸಿದ್ಧಿ ಪಡೆದಿರುವ ಪರಮೇಶ್ವರ ಭಟ್ಟರು ಶಿರಾಲಿಯಲ್ಲಿ ಸಕಲ ಸಾಮಗ್ರಿ ಲಭ್ಯವಿರುವ ನೂತನ ಎಂ ಜಿ ಮಾರ್ಟ (ಸೂಪರ್ ಮಾರ್ಕೆಟ್)ಗೆ ತನ್ನ ಉದ್ಯಮವನ್ನು ವಿಸ್ತರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸುವಂತೆ ಅವರು ಕೋರಿದ್ದಾರೆ.