ಕರಾವಳಿ ಪ್ರಭ ನ್ಯೂಸ್
ಭಟ್ಕಳ : ಪಟ್ಟಣದ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ೪೪ನೇ ವಾರ್ಷಿಕೋತ್ಸವ ಮತ್ತು ೪೦ನೇ ಪದವಿ ಪ್ರದಾನ ಸಮಾರಂಭ ಕಾಲೇಜಿನ ಆವರಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಎಂ.ಐ.ಟಿ. ಮಣಿಪಾಲದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ನಿರ್ದೇಶಕ ಹಾಗೂ ಹಿರಿಯ ಪ್ರಾಧ್ಯಾಪಕ ಡಾ. ವಿ. ರಾಮಚಂದ್ರ ಮೂರ್ತಿ, ಅಂಜುಮನ್ ಶಿಕ್ಷಣ ಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದು ಕಳೆದ ೪೪ ವರ್ಷಗಳಿಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಶಾಖೆಗಳನ್ನು ಹೊಂದಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಶ್ರಮಿಸುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಜುಮನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಉಪಾಧ್ಯಕ್ಷ ಮೇಜರ್ ಡಾ. ಮೊಹಮ್ಮದ್ ಜುಬೇರ್ ಕೋಲಾ ಮಾತನಾಡಿ ಅಂಜುಮನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮೆನೇಜ್‌ಮೆಂಟ್ ಕಾಲೇಜಿನಲ್ಲಿ ಹೊಸ ಕೋರ್ಸುಗಳಾದ ಎ.ಐ.ಎಂ.ಎಲ್., ಡಾಟಾ ಸೈನ್ಸ್, ರೋಬೋಟಿಕ್ ಕೋರ್ಸ ಸೇರಿದಂತೆ ವಿವಿಧ ಕೋರ್ಸುಗಳನ್ನು ಆರಂಭಿಸುತ್ತಿದ್ದೇವೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡುತ್ತಿದ್ದು, ಉತ್ತಮವಾದ ಕಲಿಕೋಪಕರಣಗಳು, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ಅಂಜುಮನ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಶಾಕ್ ಶಾಬಂದ್ರಿ, ಎಐಟಿಎಂ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್, ಅಬ್ದುಲ್ ಹಸೀಬ್ ಕಾಡ್ಲಿ, ತನ್ವೀರ್ ಕಾಸರಗೋಡ, ಅಂಜುಮನ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಕೆ.ಫಜಲುರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, ವಿಭಾಗಗಳ ಮುಖ್ಯಸ್ಥರಾದ ಸಿವಿಲ್ ಡಾ. ಚಿದಾನಂದ ನಾಯ್ಕ, ಮೆಕ್ಯಾನಿಕಲ್ ಡಾ. ಅನಂತಮೂರ್ತಿ ಶಾಸ್ತಿ, ಎಲೆಕ್ಟ್ರಿಕಲ್ ಪ್ರೊ. ಅನಿಲ ಕಡ್ಲೆ, ಎಲೆಕ್ಟ್ರಾನಿಕ್ಸ್ ಪ್ರೊ. ಕಿರಣ ಶಾನಭಾಗ, ಕಂಪ್ಯೂಟರ್ ಸೈನ್ಸ್ ಡಾ. ಜೆ.ಅನ್ವರ್ ಸಾದಿಕ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ಕೆ.ಫಜಲುರ್ ರೆಹಮಾನ್ ಸ್ವಾಗತಿಸಿದರು. ಪ್ರೊ. ಶ್ರೀಶೈಲ ಭಟ್ಟ, ವಿದ್ಯಾರ್ಥಿಗಳಾದ ಯಾಫಿಸ್ ಮತ್ತು ಬಿಲಾಲ್ ನಿರ್ವಹಿಸಿದರು. ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥ ಡಾ: ಅನ್ವರ್ ಸಾತಿಕ್ ವಂದಿಸಿದರು.