ಕರಾವಳಿ ಪ್ರಭ ನ್ಯೂಸ್
ಭಟ್ಕಳ : ಪುಣೆಯಲ್ಲಿ ನಡೆದ ಚಿಲ್ಡ್ರನ್ ಮತ್ತು ಕ್ಯಾಡೆಟ್ಸ್ ವಾಕೋ ಇಂಡಿಯಾ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರಣವಿ ರಾಮಚಂದ್ರ ಕಿಣಿ ಚಿನ್ನದ ಪದಕ ಗೆದ್ದು ಉತ್ತಮ ಸಾಧನೆ ಮಾಡಿದ್ದಾಳೆ. ಮೇ ೨೧ರಿಂದ ಮೇ ೨೬ರ ತನಕ ಪುಣೆಯ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದೇಶದ ೩೨ ರಾಜ್ಯಗಳಿಂದ ಕಿಕ್ ಬಾಕ್ಸಿಂಗ್ ಪಟುಗಳು ಭಾಗವಸಿದ್ದರು. ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಿಕ್ ಬಾಕ್ಸಿಂಗ್ ಪಟು ೭ ರಿಂದ ೯ ವರ್ಷ ವಯೋಮಿತಿಯ ಬಾಲಕಿಯರ ೧೮ಕೆಜಿ ಲೈಟ್ ಕಾಂಟ್ಯಾಕ್ಟ್ ವಿಭಾಗದಲ್ಲಿ ಮಹಾರಾಷ್ಟ್ರವನ್ನು ಸೋಲಿಸುವ ಮೂಲಕ ಪ್ರಣವಿ ರಾಮಚಂದ್ರ ಕಿಣಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾಳೆ. ವಾಕೋ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ನ ಅಧ್ಯಕ್ಷ ಸಂತೋಷ ಕೆ ಮತ್ತು ಪ್ರಧಾನ ಕಾರ್ಯದರ್ಶಿ ಪೂಜಾ ಹರ್ಷ ಹಾಗೂ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗಿನ ಕೋಚ್ ಹರ್ಷ ಶಂಕರ್, ಉತ್ತರಕನ್ನಡ ಜಿಲ್ಲೆಯ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಈಶ್ವರ ನಾಯ್ಕ ಮತ್ತು ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಕಿಕ್ ಬಾಕ್ಸಿಂಗ್ ನ ಕೋಚ್ ನಾಗಶ್ರೀ ನಾಯ್ಕ ಮತ್ತು ಏಲೀಯನ್ಸ್ ಮಾರ್ಷಲ್ ಆರ್ಟ್ಸ್ ನ ಕೋಚ್ ರಾದ ಇಸ್ಮಾಯಿಲ್, ರೇವೊಲ್ಯೂಷನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಕೋಚ್ ಜುಹೆಬ್, ಅಕ್ಫಾ ಅಕಾಡೆಮಿಯ ಕೋಚ್ ಅಮರ್ ಶಾಬಂದ್ರಿ ಪ್ರೋತ್ಸಾಹಿಸಿದ್ದಾರೆ.