ರೋಟರಾಕ್ಟ್‌ ಸ್ಪರ್ಧೆಯಲ್ಲಿ ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳ ಉತ್ತಮ ಸಾಧನೆ

ಕರಾವಳಿ ಪ್ರಭ ನ್ಯೂಸ್

ಭಟ್ಕಳ : ಗೋವಾದ ಸಂಖಲೀಮ್‌ನಲ್ಲಿ ನಡೆದ ೫೨ನೇ ರೋಟರಾಕ್ಟ್ ಜಿಲ್ಲಾ ಸಮಾವೇಶದಲ್ಲಿ ಆಯೋಜಿಸಲ್ಪಟ್ಟ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪಟ್ಟಣದ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ರಕ್ಷಿತ್ ನಾಯ್ಕ ನೇತೃತ್ವದ ಯಕ್ಷಗಾನ ತಂಡವು ಉತ್ತಮ ಸಾಧನೆ ಮಾಡಿದೆ.ಜತೆಗೆ 20222-23 ನೇ ಸಾಲಿನಲ್ಲಿ ಭಟ್ಕಳ ರೋಟರಿ ಕ್ಲಬ್‌ನ ಸಹಭಾಗಿತ್ವದಲ್ಲಿ ಮಹಾವಿದ್ಯಾಲಯದ ರೋಟರಾಕ್ಟ್ ಕ್ಲಬ್‌ನಿಂದ ಆಯೋಜಿಸಲ್ಪಟ್ಟ ರೋಟರಾಕ್ಟ್ ಅಂತರ್ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮಕ್ಕೆ ಉತ್ತಮ ಅಂತರ್ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಪ್ರಶಸ್ತಿ ದೊರೆತಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ ನಾಯಕ್, ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಪ್ರಾಂಜಲ್ ಮರಾಠೆ, ಪ್ರಾಂಶುಪಾಲ ಶ್ರೀನಾಥ್ ಪೈ, ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ, ಕ್ಲಬ್ ಅಧ್ಯಕ್ಷೆ ವೈಷ್ಣವಿ ನಾಯ್ಕ್, ಕಾರ್ಯದರ್ಶಿ ಪ್ರಜ್ಞಾ ಗೋಲಿ, ರೋಟರಿ ಕ್ಲಬ್ ಪದಾಧಿಕಾರಿಗಳು, ರೋಟರಾಕ್ಟ್ ಪದಾಧಿಕಾರಿಗಳು, ಬೋಧಕ- ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *