ಕರಾವಳಿ ಪ್ರಭ ನ್ಯೂಸ್
ಶಿರಾಲಿಯ ಜನತಾ ವಿದ್ಯಾಲಯದ ಸನಿಹದ ಕಟ್ಟಡದಲ್ಲಿ ಪರಮೇಶ್ವರ ಭಟ್ಟ ಇವರ ಮಾಲೀಕತ್ವದ ನೂತನ ಎಂ ಜಿ ಮಾರ್ಟ (ಸೂಪರ್ ಮಾರ್ಕೆಟ್ )ನ್ನು ಬುಧವಾರ ಮಧ್ಯಾಹ್ನ ಶುಭ ಮುಹೂರ್ತದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಲೋಕಾರ್ಪಣಗೊಳಿಸಿದರು.
ಅಶೋಕ ಭಟ್ಟ ದಂಪತಿಗಳು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡರು. ಶ್ರೀಗಳಿಗೆ ಮಾತೆಯರಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಎಂ ಜಿ ಮಾರ್ಟನ ಮಾಲೀಕ ಪರಮೇಶ್ವರ ಭಟ್ಟ, ಪ್ರಮುಖರಾದ ವಿನಾಯಕ ಭಟ್ಟ ಬೆಟ್ಕೂರು, ಎಂ ಎಂ ಹೆಬ್ಬಾರ, ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ,ಮಂಜುನಾಥ ಹೆಬ್ಬಾರ, ಎಂ ವಿ ಭಟ್ಟ, ವೆಂಕಟ್ರಮಣ ಹೆಬ್ಬಾರ ಗಣಾಮಂದಿ, ಮಂಜುನಾಥ ಹೆಬ್ಬಾರ ಸುಳಖಂಡ, ಧನ್ವಂತರಿ ದೇವಸ್ಥಾನದ ಅರ್ಚಕ ಶಂಕರ ಭಟ್ಟ, ನೀಲಕಂಠ ಉಪಾಧ್ಯಾಯ, ಮಾನಾಸುತ ಶಂಭು ಹೆಗಡೆ,ಬಾಲಕೃಷ್ಣ ಶಾಸ್ತ್ರಿ, ಭಟ್ಕಳ ಹವ್ಯಕ ವಲಯದ ಅಧ್ಯಕ್ಷೆ ರೇಶ್ಮಾ ಭಟ್ಟ ಮುಂತಾದವರಿದ್ದರು. ಎಂ ಜಿ ಮಾರ್ಟನಲ್ಲಿ ಕಿರಾಣಿ, ದಿನಗಳಕೆ, ಸ್ಟೇಷನರಿ, ಅಗತ್ಯ ಸಾಮಗ್ರಿಗಳು ಲಭ್ಯವಿದೆ.