ಕರಾವಳಿ ಪ್ರಭ ನ್ಯೂಸ್
ಭಟ್ಕಳ: ಉಮೇಶ ಮುಂಡಳ್ಳಿ ಅವರು ಹಾಡಿದ ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ವೈವಿಧ್ಯ ಸಾಂಸ್ಕೃತಿಕ ಸಾಹಿತ್ಯಕ ಹಿರಿಮೆ ಸಾರುವಂತಹ ಅಪರೂಪದ ಅಲ್ಬಮ್ ಗೀತೆ ಬಿಡುಗಡೆಗೊಂಡಿದೆ.ಉಮೇಶ ಮುಂಡಳ್ಳಿ ಅವರದ್ದೇ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ ಇರುವ ಗೀತೆಯನ್ನು ಸ್ವತ: ಸುಗಮ ಸಂಗೀತ ಗಾಯಕರಾಗಿರುವ ಉಮೇಶ ಮುಂಡಳ್ಳಿ ಅವರೇ ಹಾಡಿರುವುದು ವಿಶೇಷವಾಗಿದೆ. ಸದಾ ಹೊಸತನ ಹಾಗೂ ವೈವಿಧ್ಯತೆಯನ್ನು ಹುಡುಕುವ ಉಮೇಶ ಮುಂಡಳ್ಳಿ ತಮ್ಮ ಮಗಳು ನಿನಾದಳ ಜನ್ಮ ದಿನದಂದು ಮಗಳ ಕೈಯಿಂದಲೇ ಈ ವಿಶೇಷ ಗೀತೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಉಮೇಶ ಮುಂಡಳ್ಳಿ ಅವರ ಜೊತೆ ಅವರ ಪತ್ನಿ, ಲೇಖಕಿ ರೇಷ್ಮಾ ಉಮೇಶ ಇದ್ದರು. ಈ ವಿಶೇಷ ಗೀತೆಗೆ ವಿನಾಯಕ ದೇವಾಡಿಗ ಕೊಳಲು, ಆದಿತ್ಯ ದೇವಾಡಿಗ ತಬಲ ಹಾಗೂ ವಿಘ್ನೇಶ ಗೌಡ ಹೊನ್ನಾವರ ಇವರು ಕೀಬೋರ್ಡ ನಲ್ಲಿ ಸಹಕರಿಸಿದ್ದಾರೆ.